ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಚಿಟ್ಟಾಣಿ ಸಪ್ತಾಹ ಸಮಾರೋಪ ಸಾಧಕರಿಬ್ಬರಿಗೆ ಪುರಸ್ಕಾರ

ಲೇಖಕರು : ನಾರಾಯಣ ಎಂ. ಹೆಗಡೆ
ಸೋಮವಾರ, ನವ೦ಬರ್ 9 , 2015
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ, ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸಿರುವ ಚಿಟ್ಟಾಣಿ ಸಪ್ತಾಹ 2015ರ ಸಮಾರೋಪ ಸಮಾರಂಭದಲ್ಲಿ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗೂ ಹವ್ಯಾಸಿ ಕಲಾವಿದ ಬನ್ನಂಜೆ ನಾರಾಯಣರಿಗೆ ಟಿ.ವಿ. ರಾವ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಲಾಯಿತು.

ಸುಬ್ರಹ್ಮಣ್ಯ ಧಾರೇಶ್ವರ

ಬಡಗುತಿಟ್ಟಿನ ಅಗ್ರಮಾನ್ಯ ಭಾಗವತರಲ್ಲಿ ಓರ್ವರಾದ ಸುಬ್ರಹ್ಮಣ್ಯ ಧಾರೇಶ್ವರ ಅವರು ಸಾಂಪ್ರದಾಯಿಕತೆಯೊಂದಿಗೆ ಪ್ರಯೋಗಶೀಲತೆಯನ್ನು ಮೇಳೈಸಿ ಕಲಾರಸಿಕರ ಮನ ಗೆದ್ದವರು. ಇವರು ಮೂಲತಃ ಉತ್ತರಕನ್ನಡದ ಗೋಕರ್ಣದವರು. ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ್ದ ಧಾರೇಶ್ವರರಿಗೆ ನಾರ್ಣಪ್ಪ ಉಪ್ಪೂರರು ಗುರುವಾಗಿ ದೊರೆತರು. ಉಪ್ಪೂರರ ಶಿಷ್ಯರೇ ಆದ ಕಾಳಿಂಗ ನಾವಡರ ಹಾಡುಗಾರಿಕೆಯು ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ತನಗಿದ್ದ ಸುಮಧುರ ಶಾರೀರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಹುಬೇಗನೆ ಮುಖ್ಯ ಭಾಗವತರಾಗಿ ಮೇಳದಲ್ಲಿ ಅವಕಾಶ ಪಡೆದರು.

ಅಮೃತೇಶ್ವರೀ, ಹಿರೇಮಹಾಲಿಂಗೇಶ್ವರ, ಶಿರಸಿ ಪಂಚಲಿಂಗ ಮೇಳಗಳಲ್ಲಿ ತಿರುಗಾಟ ಮಾಡಿ ಮುಂದೆ 3 ದಶಕಗಳ ಕಾಲ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಪೌರಾಣಿಕ ಮತ್ತು ಹೊಸ ಪ್ರಸಂಗಗಳು ರಂಗದಲ್ಲಿ ವಿಜೃಂಭಿಸುವಂತೆ ಮಾಡಿದ್ದಾರೆ. ಗುರು ನಾರ್ಣಪ್ಪ ಉಪ್ಪೂರರಂತೆ ರಂಗತಂತ್ರ ಮತ್ತು ರಂಗದ ಮೇಲಿನ ಸಂಪೂರ್ಣ ಹಿಡಿತ ಸಾಧಿಸಿದ ಭಾಗವತರು. ಖಚಿತ ಲಯಗಾರಿಕೆ, ತಾಳ, ಸ್ಪುಟವಾದ ಸಾಹಿತ್ಯ ನಿರೂಪಣೆ ಇವರ ವಿಶೇಷತೆ. ಪುರಾಣ ಪ್ರಸಂಗಗಳ, ಪದ್ಯಗಳ ಮಟ್ಟು-ತಿಟ್ಟುಗಳ ಗುಟ್ಟನ್ನು ಚೆನ್ನಾಗಿ ಬಲ್ಲ ಇವರು ಪಾರಂಪ ರಿಕತೆಗೆ ಹೊಸತನದ ಸ್ಪರ್ಶ ನೀಡಿದವರು. ಹಿಮ್ಮೇಳ ವೈಭವದ ಪರಿಕಲ್ಪನೆ ಇವರ ಇನ್ನೊಂದು ಕೊಡುಗೆ. 1988 ರಲ್ಲೇ ಅದನ್ನು ಪ್ರಯೋಗಕ್ಕೆ ತಂದು ಯಶಸ್ಸು ಕಂಡವರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 10 ವರ್ಷಗಳಿಂದ ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಿಸಿ ತಾಳ ಮದ್ದಳೆ ಸಪ್ತಾಹ, ಯಕ್ಷಗಾನದ ಕುರಿತ ಗೋಷ್ಠಿಗಳನ್ನು ನಡೆಸುತ್ತ ಸಂಘಟಕರಾಗಿಯೂ ಕಲಾಸೇವೆಗೈಯುತ್ತಿದ್ದಾರೆ.

ಬನ್ನಂಜೆ ನಾರಾಯಣ

ಶಿಸ್ತು, ಸಮಯಪ್ರಜ್ಞೆ, ಸ್ವಾಭಿಮಾನದ ಪ್ರತಿರೂಪದಂತಿರುವ ಬನ್ನಂಜೆ ನಾರಾಯಣ ಅವರದು 70ರ ಅಂಚಿನಲ್ಲೂ ಕ್ರಿಯಾಶೀಲ ವ್ಯಕ್ತಿತ್ವ. ತಾಲೂಕು ಡೆವಲಪ್‌ಮೆಂಟ್‌ ಬೋರ್ಡಿನಲ್ಲಿ ವೃತ್ತಿ ಆರಂಭಿಸಿ ಸರಕಾರಿ ಉದ್ಯೋಗಿಯಾಗಿ ಬೇರೆ ಬೇರೆ ಕಚೇರಿಗಳಲ್ಲಿ ದುಡಿದು ಉಡುಪಿ ಸರಕಾರಿ ಪ್ರೌಢಶಾಲೆ (ಬೋರ್ಡ್‌ ಹೈಸ್ಕೂಲ್‌)ಯಲ್ಲಿ ಗ್ರಂಥಪಾಲಕ ಕೆಲಸ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು. ತಾನು ಕಾರ್ಯನಿರ್ವಹಿಸಿದಲ್ಲೆಲ್ಲ ಶಿಸ್ತು ಕ್ರಮಬದ್ಧತೆಯನ್ನು ರೂಢಿಸಿದವರು. ನಿವೃತ್ತಿಯ ಬಳಿಕ ಯಾವುದೇ ಪ್ರತಿಫ‌ಲದ ಅಪೇಕ್ಷೆ ಇಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ಉಡುಪಿಯ ಯಕ್ಷಗಾನ ಕಲಾರಂಗದ ಸಕ್ರಿಯ ಕಾರ್ಯಕರ್ತರು.

ಇವರಿಗೆ ಯಕ್ಷಗಾನ ಪ್ರವೃತ್ತಿ. ಕಾಂತಪ್ಪ ಮಾಸ್ತರರಿಂದ ಯಕ್ಷಗಾನದ ಮೂಲ ಪಾಠ ಕಲಿತು ಉಡುಪಿ ಯಕ್ಷಗಾನ ಕೇಂದ್ರದ ಗುರು ವೀರಭದ್ರ ನಾಯಕರಿಂದ ನೃತ್ಯವನ್ನೂ ನೀಲಾವರ ರಾಮಕೃಷ್ಣಯ್ಯನವರಿಂದ ಯಕ್ಷಗಾನ ಭಾಗವತಿಕೆಯನ್ನೂ ಹಿರಿಯಡಕ ಗೋಪಾಲರಾಯರಿಂದ ಮದ್ದಲೆಯನ್ನೂ ಅಭ್ಯಾಸ ಮಾಡಿದರು. ಯಕ್ಷಗಾನ ವೇಷಧಾರಿಯಾಗಿ ಪುರುಷ ಮತ್ತು ಪುಂಡು ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮಂಜುಳಾ ಯಕ್ಷಗಾನ ಕಲಾಮಂಡಳಿಯಲ್ಲಿ ದೀರ್ಘ‌ಕಾಲ ಟಿ.ವಿ. ರಾಯರಿಗೆ ಮದ್ದಳೆ ಸಾಥ್‌ ನೀಡಿದ್ದರು. ಯಕ್ಷಗುರುವಾಗಿ ಅಂಬಲಪಾಡಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಸಹಿತ ಹಲವಾರು ಸಂಘಟನೆಗಳಲ್ಲಿ ದುಡಿದಿದ್ದಾರೆ. ಜತೆಗೆ 20 ಯಕ್ಷಗಾನ ಪ್ರಸಂಗಗಳಿಗೆ ಅರ್ಥ ಸಾಹಿತ್ಯ ಬರೆದಿದ್ದಾರೆ.

*********************


ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ